ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಬೇಕಾದರೆ ರೈತರು ಇನ್ನು ಮುಂದೆ ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರಿತ ಇಲ್ಲವೇ ಮುಖ ದೃಢೀಕರಣ ಆಧಾರಿತ (biometroc e kyc is still mandatory for pm kisan scheem Sep-2026) ಇ -ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ. ಪಿ.ಎಂ. ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ರೈತರಿಗೆ ಈಗಿನಿಂದಲೇ ಇದು ಕಡ್ಡಾಯವಾಗಿದ್ದು, ರೈತರು ಬಯೋಮೆಟ್ರಿಕ್ ಸಹಿತ ಅಥವಾ ಫೇಸ್ ಡಿಟೆಕ್ಷನ್ ಆಧಾರಿತ ಕೆ ವೈ ಸಿ ಪೂರ್ಣಗೊಳಿಸದಿದ್ದರೆ ಮುಂದಿನ ತಿಂಗಳಿಂದ ಪಿಎಂ ಕಿಸಾನ್ ಯೋಜನೆಯ ಹಣವೇ ರೈತರಿಗೆ ಬರುವುದಿಲ್ಲ.
ಪಿ.ಎಂ. ಕಿಸಾನ್ ಯೋಜನೆಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ ಆದ್ದರಿಂದ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಕೂಡಲೇ ಬಯೋಮೆಟ್ರಿಕ್ ಸಹಿತ ಅಥವಾ ಫೇಸ್ ಡಿಟೆಕ್ಷನ್ ಆಧಾರಿತ ಕೆ ವೈ ಸಿ ಮಾಡಿಸಿಕೊಳ್ಳಿ ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ರೈತರಿಗೆ ಮನವಿ ಮಾಡಿಕೊಂಡಿದ್ದಾರೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯು ಕೆವೈಸಿ ಮಾಡಿಸಿಕೊಳ್ಳಬಹುದು ಇಲ್ಲದಿದ್ದರೆ ರೈತರು ತಮ್ಮ ಮೊಬೈಲ್ ಗಳಲ್ಲಿ ಪಿ.ಎಂ.ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ಮುಖ ದೃಢೀಕರಣ ಮಾಡಿ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ತಿಳಿಸಿದ್ದಾರೆ.
ದುರುಪಯೋಗ ತಡೆಯಲು ಈ ಕ್ರಮ, ಈ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆಯಲು, ಮೃತರನ್ನು ಪಟ್ಟಿಯಿಂದ ಕೈಬಿಟ್ಟು, ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆಧಾರ್ ಓಟಿಪಿ ಆಧಾರಿತ ಇ-ಕೆವೈಸಿಯಿಂದಾಗಿ ಮೃತಪಟ್ಟವರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ, ಕೇಂದ್ರ ಸರ್ಕಾರವು ಓಟಿಪಿ ವ್ಯವಸ್ಥೆ ರದ್ದುಗೊಳಿಸಿ, ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕಿದೆ.
ಇನ್ನೂ 1,99,067 ರೈತರ ಇ-ಕೆವೈಸಿ” ಬಾಕಿ, ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,99,067 ರೈತರ ಇ-ಕೆವೈಸಿ” ಬಾಕಿ ಇದೆ. (ಅಫಜಲಪೂರ-26786, ಆಳಂದ-31954, ಚಿಂಚೋಳಿ-19324, ಚಿತ್ತಾಪೂರ-17097, ಕಲಬುರಗಿ-18418, ಕಾಳಗಿ-13792, ಕಮಲಾಪೂರ-11156, ಜೇವರ್ಗಿ-21056, ಸೇಡಂ-20621, ಶಹಾಬಾದ-3364 ಹಾಗೂ ಯಡ್ರಾಮಿ-15499) ಹಾಗಾಗಿ ರೈತರು ಕೂಡಲೇ ಬಯೋಮೆಟ್ರಿಕ್ ಆಧಾರಿತ ಇಲ್ಲವೇ ಫೇಸ್ ಡಿಟೆಕ್ಷನ್ ಆಧಾರಿತ kyc ಪೂರ್ಣಗೊಳಿಸುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿ ಸುವಂತೆ ಕಲ್ಬುರ್ಗಿ ಜಿಲ್ಲಾಧಿಕಾರಿ ಪತ್ರಿಕಾ ಹೇಳಿಕೆ ಮೂಲಕ ರೈತರಿಗೆ ಮನವಿ ಮಾಡಿಕೊಂಡಿದ್ದಾರೆ.
DDPI ಅಮಾನತ್ತು ಆದೇಶ, ಶಿಕ್ಷಕರಾದ ಗುರುರಾಜ್ ಜೋಷಿ ಹಾಗೂ ಅಣ್ಣಾ ಸಾಹೇಬ್ ದೇಶಮುಖ ಅವರು ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಬಗ್ಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ ಇವರು ಯಾದಗಿರಿ ಶಿಕ್ಷಣ ಇಲಾಖೆ ಉಪನಿರ್ದೇಶಕ DDPI ಅವರಿಗೆ ಲಿಖಿತ ದೂರು ಸಲ್ಲಿಸಿ ಈ ಶಿಕ್ಷಕರನ್ನ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದರು. ಈ ದೂರಿನ ಆಧಾರದ ಮೇಲೆ ಯಾದಗಿರಿ ಡಿಡಿಪಿಐ ಅವರು, ಆರ್ ಎಸ್ ಎಸ್ ಪತ ಸಂಚಲನದಲ್ಲಿ ಪಾಲ್ಗೊಂಡ ಕಾರಣ ಈ ಇಬ್ಬರು ಶಿಕ್ಷಕರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
KAT ಮೊರೆ ಹೋಗಿದ್ದ ಶಿಕ್ಷಕರು, ಯಾದಗಿರಿ ಡಿಡಿಪಿ ಅವರು ತಮ್ಮನ್ನು ಅಮಾನತ್ತು ಮಾಡಿರುವ ಆದೇಶವನ್ನು ಪ್ರಶ್ನಿಸಿ, ಹುಣಸಗಿ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕರಾದ ಗುರುರಾಜ ಜೋಶಿ ಮತ್ತು ಅಣ್ಣ ಸಾಹೇಬ್ ದೇಶಮುಖ್ ಇವರು ಕಲಬುರಗಿಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ KAT ಮೊರೆ ಹೋಗಿದ್ದರು. ತಮ್ಮ ಅಮಾನತ್ತು ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಈ ಶಿಕ್ಷಕರು KAT ಗೆ ಮೇಲ್ಮನವಿ ಸಲ್ಲಿಸಿದರು.
RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್, ಆರ್ ಎಸ್ ಎಸ್ ಪತ ಸಂಚಲನದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕೆ ಅಮಾನತ್ತುಗೊಂಡಿದ್ದ ಸರ್ಕಾರಿ ಶಾಲಾ ಶಿಕ್ಷಕರಾದ ಗುರುರಾಜ್ ಜೋಶಿ ಹಾಗೂ ಅಣ್ಣ ಸಾಹೇಬ್ ದೇಶಮುಖ್ ಇವರಿಗೆ, ಕಲಬುರಗಿಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬಿಗ್ ರಿಲೀಫ್ ನೀಡಿದೆ. ಯಾದಗಿರಿ ಡಿ ಡಿ ಪಿ ಐ ಅವರು ಹೊರಡಿಸಿದ್ದ ಈ ಇಬ್ಬರು ಶಿಕ್ಷಕರ ಅಮಾನತ್ತು ಆದೇಶಕ್ಕೆ KAT ಇಂದು ತಡೆಯಾಜ್ಞೆ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನ ಬರುವ ಅಕ್ಟೋಬರ್ ತಿಂಗಳಿಗೆ ಮುಂದೂಡಿದೆ.
ಶಿಕ್ಷಕರ ವಾದವೇನಿತ್ತು ? ಆರ್ ಎಸ್ ಎಸ್ ಪಥ ಸಂಚಲನದಲ್ಲಿ ತಾವು ಭಾಗಿಯಾಗಿದ್ದನ್ನು ಈ ಶಿಕ್ಷಕರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಆದರೆ ನಾವು ಸರ್ಕಾರಿ ರಜಾ ದಿನವಾದ ರವಿವಾರ ಈ ಪತ ಸಂಚಲನದಲ್ಲಿ ಪಾಲ್ಗೊಂಡಿದ್ದೇವೆ. ಆರ್ ಎಸ್ ಎಸ್ ನಂತಹ ಸಾಮಾಜಿಕ ಸಂಘಟನೆ ನಡೆಸುವ ಪಥಸಂಚಲನದಲ್ಲಿ ಪಾಲ್ಗೊಳ್ಳುವುದು ಅಪರಾಧವೇ ನಲ್ಲ ಎನ್ನುವುದು ನಮ್ಮ ಭಾವನೆ. ಹಾಗಾಗಿ ಡಿಡಿಪಿಐ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಎಂದು ಈ ಶಿಕ್ಷಕರು KAT ಮುಂದೆ ವಾದ ಮಂಡಿಸಿದ್ದರು.
ಮಹತ್ವ ಪಡೆದುಕೊಂಡ ತಡೆಯಾಜ್ಞೆ, ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಮತ್ತು ಆರ್ ಎಸ್ ಎಸ್ ನಡುವೆ ಬಹಿರಂಗ ಸಂಘರ್ಷ ನಡೆಯುತ್ತಿರುವ ಹೊತ್ತಲ್ಲೇ ಆರ್ ಎಸ್ ಎಸ್ ಪಥಾ ಸಂಚಲನದಲ್ಲಿ ಪಾಲ್ಗೊಂಡ ಶಿಕ್ಷಕರ ಅಮಾನತ್ತು ಆದೇಶಕ್ಕೆ KAT ತಡೆಯಾಜ್ಞೆ ನೀಡಿರುವುದು ಮಹತ್ವದ ಆದೇಶ ಎನಿಸಿದೆ ಕಲಬುರಗಿ : Lokayukta trap | ಪೋಲಿಸರೇ ಅರೆಸ್ಟ್ ! ಕಾನೂನು ಕಾಪಾಡಬೇಕಾದ ಪೊಲೀಸರೇ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದ ಘಟನೆ ಗೃಹ ಸಚಿವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಳಾದ ಪರಶುರಾಮ್ ಮತ್ತು ವಿರೇಶ ಲೋಕಾಯುಕ್ತ ಬಲೆಗೆ ಬಿದ್ದವರು.
ಈ ಇಬ್ಬರು ಕಾನ್ಸ್ಟೇಬಲ್ ಗಳು ಕಲ್ಬುರ್ಗಿಯಲ್ಲಿ ವಿಶೇಷವಾಗಿ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದರು. ಲಂಚ ಕೊಟ್ಟರೆ ಗಡಿ ಪಾರಾಗುವವರ ಪಟ್ಟಿಯಿಂದ ನಿಮ್ಮ ಹೆಸರು ಕೈ ಬಿಡಿಸುವುದಾಗಿ ಹೇಳುತ್ತಿದ್ದರು. ಮೊಬೈಲ್ ಮೂಲಕ ಹೇಗೆ ಮಾಡಬಹುದು ? ಹೌದು ! ರೈತರು, ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ತಾವೇ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದ್ದರೆ ಈ ಕೆಳಗೆ ನೀಡಿರುವ ಮಾಹಿತಿ ಆಧರಿಸಿ ಮಾಡಬಹುದು.
Play Store – PM-KISAN
Lokayukta trap | ಪೋಲಿಸರೇ ಅರೆಸ್ಟ್ !
ಅದೇ ರೀತಿ ಕಲ್ಬುರ್ಗಿಯ ರೌಡಿಶೀಟರ್ ಖನ್ನಾ ಪಟೇಲ್ ಎನ್ನುವಾತನಿಗೂ ಹೆದರಿಸಿ ಐವತ್ತು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದರು. ಅಲ್ಲದೆ ಮತ್ತೆ 20 ಸಾವಿರ ರೂಪಾಯಿ ಕೊಡು ಎಂದು ಪೀಡಿಸುತ್ತಿದ್ದರು. ಇವರ ಕಾಟದಿಂದ ಕಂಗೆಟ್ಟ, ರೌಡಿಶೀಟರ್ ಖನ್ನಾ ಪಾಟೀಲ್, ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್ಸ್ಟೇಬಲ್
ಪರಿಣಾಮ ತಾವು ಕೆಲಸ ನಿರ್ವಹಿಸುವ ಬ್ರಹ್ಮಪುರ ಪೊಲೀಸ್ ಠಾಣಾ ಕಾಂಪೌಂಡಿನಲ್ಲಿಯೇ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಕಾನ್ಸ್ಟೇಬಲ್ ಗಳಾದ ಪರಶುರಾಮ್ ಮತ್ತು ವಿರೇಶ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ತಾವು ಲಂಚ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಕಾನ್ಸ್ಟೇಬಲ್ ವಿರೇಶ ಲೋಕಾಯುಕ್ತರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇನ್ನು ಕಾನ್ಸ್ಟೇಬಲ್ ಪರಶುರಾಮನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಓಡಿ ಹೋಗಿರುವ ಇನ್ನೊಬ್ಬ ಲಂಚ ಬಾಕ ಕಾನ್ಸ್ಟೇಬಲ್ ವಿರೇಶ ಪತ್ತೆಗೆ ಲೋಕಾಯುಕ್ತ ಪೊಲೀಸರು ಜಾಲ ಬೀಸಿದ್ದಾರೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಈ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ.
ಕರಿ ಕತ್ತರಿಸದಿದ್ದರೆ ತಲೆಯೇ ಕಟ್, ಹೌದು ! ಕರಿ ಹರಿಯುವ ವೇಳೆ ತಲವಾರದಿಂದ ಒಂದೇ ಹೊಡೆತಕ್ಕೆ ಕರಿ ಹಗ್ಗ ಕತ್ತರಿಸಲೇಬೆಕು. ಇಲ್ಲದಿದ್ದರೆ ಆತನ ತಲೆಯೇ ಕಟ್ ಮಾಡುತ್ತಿದ್ದರಂತೆ. ಈ ಥರದ ಭಯಾನಕ ಆಚರಣೆ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ ಗ್ರಾಮದಲ್ಲಿ ಈ ಹಿಂದೆ ಆಚರಿಸಲಾಗುತ್ತಿತ್ತು. ಕರಿ ಹರಿಯದಿದ್ದರೆ ಜೀವ ಹೋಗುವುದು ಗ್ಯಾರೆಂಟಿ ಎನ್ನುವ ಭಯದಿಂದ ಕರಿ ಹರಿಯುವವರು ತಲವಾರ ಕೈಯಲ್ಲಿ ಹಿಡಿದು ಎತ್ತಿನ ಬಂಡಿ ಹತ್ತುವ ಮುನ್ನ ಹೆಂಡತಿಯ ಕೊರಳಲ್ಲಿನ ತಾಳಿ ತಗೊಂಡು ಹೋಗುತ್ತಿದ್ದರಂತೆ. ಮರಳಿ ಬಂದರೆ ಮತ್ತೆ ತಾಳಿ ಹೆಂಡತಿಯ ಕೊರಳಿಗೆ
ಹಾಕುತ್ತಿದ್ದರಂತೆ. ಇತ್ತಿಚಿನ ದಿನಗಳಲ್ಲಿ ಕರಿ ಹರಿಯುವ ಸಂಪ್ರದಾಯದಲ್ಲಿ ಈ ಭಯಾನಕತೆಯ ಅಂಶ ಕೈ ಬಿಡಲಾಗಿದೆ. ಆದರೆ ಸಾಂಕೇತಿಕವಾಗಿ ಅದೇ ರೀತಿ ಹಬ್ಬ ಆಚರಣೆ ಈಗಲೂ ಭಂಕೂರ ಗ್ರಾಮದಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ತಲೆ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಈಗಲೂ ಕರಿ ಹರಿಯುವ ವ್ಯಕ್ತಿ ಎತ್ತಿನ ಬಂಡಿ ಹತ್ತುವ ಮುನ್ನ ಹೆಂಡತಿಯ ಕೊರಳಲ್ಲಿನ ತಾಳಿ ತೆಗೆದೇ ಬರುತ್ತಾನೆ. ತೀವ್ರ ಸಿದ್ದತೆಯೊಂದಿಗೆ ಹರಿತವಾದ ತಲವಾರದಿಂದ ಒಂದೇ ಬಾರಿಗೆ ಕರಿಯ ಹಗ್ಗ ಕತ್ತರಿಸುತ್ತಾನೆ. ಭಂಕೂರ ಗ್ರಾಮದಲ್ಲಿ ತಲೆ ತಲಾಂತರದಿಂದ ನಡೆದುಕೊಂಡು ಬರುತ್ತಿರುವ ಈ ಆಚರಣೆ ಇತರೇ ಗ್ರಾಮಗಳಿಗೆ ಹೋಲಿಸಿದರೆ ವಿಶೇಷತೆಯಿಂದ ಕೂಡಿದೆ.
ಕೃಷಿ ಚಟುವಟಿಕೆ ಚುರುಕು ವೇಳೆ ಹೊಸ ಹುರುಪು, ವಾಸ್ತವವಾಗಿ ಮುಂಗಾರು ಆರಂಭದಲ್ಲಿಯೇ ಕಾರಣ ಹುಣ್ಣಿಮೆ ಬರುವುದು. ಮುಂಗಾರು ಬಿರುಸಾದ ನಂತರ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಸೇರಿ ಇತರೇ ಕೃಷಿ ಚಟುವಟಿಕೆಗಳನ್ನು ಬಿರುಸುಗೊಳಿಸುವ ಕಾಲ ಇದು. ಈ ರೀತಿ ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ತಮ್ಮ ಹೆಗಲಿಗೆ ಹೆಗಲಾಗಿ ದುಡಿಯುವ ಎತ್ತುಗಳಿಗೆ ಆರಾಧಿಸುವ ರೈತನ ಸುಗುಣವೇ ಕಾರ ಹುಣ್ಣಿಮೆ. ಈ ಕಾರ ಹುಣ್ಣಿಮೆ ಇವತ್ತೂ ಸಹ ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಎತ್ತುಗಳನ್ನು ಬಸವಣ್ಣನ ಹೆಸರಿನಲ್ಲಿ ಆರಾಧಿಸುವುದೇ ಕಾರಹುಣ್ಣಿಮೆ. ಒಂದರ್ಥದಲ್ಲಿ ಇದು ಎತ್ತುಗಳ ಹಬ್ಬ… ಎಲ್ಲರಿಗೂ ಕಾರಹುಣ್ಣಿಮೆಯ ಹಾರ್ದಿಕ ಶುಭಾಷಯಗಳು..